ನಾನು ಅವರ ಹಾಸಿಗೆಯ ಮೇಲೆ ಕುಳಿತಿದ್ದೆ: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ ಸಾಕ್ಷಿ ಮಲಿಕ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಕುರಿತು ಮೇಲೆ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ಸಾಕ್ಷಿ ಮಲಿಕ್ ತಮ್ಮ ವೃತ್ತಿಜೀವನದ ಕೆಲವು ಘಟನೆಗಳ ಬಗ್ಗೆ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.

2012ರ ಅಲ್ಮಾಟಿ (ಕಝಾಕಿಸ್ತಾನ್)ನಲ್ಲಿ ನಡೆದ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ವೇಳೆ ಆಗಿನ ಕುಸ್ತಿ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಹೊಟೇಲ್ ಕೋಣೆಯೊಂದರಲ್ಲಿ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ತನ್ನ ಪೋಷಕರೊಂದಿಗೆ ಮಾತನಾಡಲು ನನ್ನನ್ನು ಬ್ರಿಜ್ ಭೂಷಣ್ ಹೊಟೇಲ್ ಕೋಣೆಯೊಂದರೊಳಗೆ ಕಳುಹಿಸಿದರು. ಅದರ ನಂತರ ನಡೆದದ್ದು ನನ್ನ ಜೀವನದ ಅತ್ಯಂತ ಆಘಾತಕಾರಿ ಘಟನೆಗಳಲ್ಲಿ ಒಂದು ಎಂದು ಹೇಳಿದ್ದಾರೆ.

ನಾನು ಒಳಗೆ ಹೋಗಿ ನನ್ನ ಮನೆಯವರೊಂದಿಗೆ ಮಾತನಾಡುತ್ತಿದ್ದೆ. ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರೂ ಕೂಡ ಒಳಗೆ ಬಂದರು. ನಾನು ಕಾಲ್ ಕಟ್ ಮಾಡಿದ ತಕ್ಷಣ ಅವರು ಕಿರುಕುಳ ನೀಡಲು ಪ್ರಯತ್ನಿಸಿದರು. ಅವನನ್ನು ತಳ್ಳಿ ಅಳಲು ಪ್ರಾರಂಭಿಸಿದೆ. ನನ್ನಿಂದ ಅವರು ಏನನ್ನು ಬಯಸಿದ್ದರೋ, ಅದು ನನ್ನಿಂದ ಆಗುವುದಿಲ್ಲ ಎಂದು ತಿಳಿದಾಗ ಅವರೇ ನನ್ನಿಂದ ದೂರ ಸರಿದರು. ಬಳಿಕ ನಾನು ಅಲ್ಲಿಂದ ನನ್ನ ಕೋಣೆಗೆ ಹೋದೆ. ಆದರೆ ಈ ರೀತಿ ಅನುಭವಿಸಿದ್ದು ಮೊದಲಲ್ಲ. ಇದಕ್ಕೂ ಮುಂಚೆ ಟ್ಯೂಷನ್ ಶಿಕ್ಷಕರೊಬ್ಬರು ನನ್ನೊಂದಿಗೆ ಬಾಲ್ಯದಲ್ಲಿರುವಾಗ ಅನುಚಿತವಾಗಿ ವರ್ತಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ನನ್ನ ಬಾಲ್ಯದಲ್ಲಿಯೂ ನಾನು ಕಿರುಕುಳಕ್ಕೊಳಗಾಗಿದ್ದೇನೆ. ಆದರೆ ನನ್ನ ತಾಯಿ ನನ್ನ ಬೆನ್ನೆಲುಬಾಗಿದ್ದರು. ನಾನು ಅಲ್ಮಾಟಿಯಲ್ಲಿ ಏನಾಯಿತು ಎಂಬುದನ್ನು ಮರೆತುಬಿಡಲು ಪ್ರಯತ್ನಿಸಿದೆ. ನನ್ನ ಪೋಷಕರು ನನಗೆ ಅದೇ ರೀತಿಯ ಸಲಹೆ ನೀಡಿದರು. ಇಷ್ಟೆಲ್ಲ ನಡೆದರೂ ನನ್ನ ಕುಟುಂಬದವರು ಸ್ಪರ್ಧೆ ಹಾಗೂ ತರಬೇತಿಯ ಕುರಿತು ಗಮನ ಹರಿಸಲು ತಿಳಿಸಿದರು. ತರಬೇತಿಯನ್ನು ಮುಂದುವರೆಸಲು ಕೂಡ ನನ್ನ ಕುಟುಂಬದವರು ಅನುಮತಿ ನೀಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞಳಾಗಿದ್ದೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!