ಡಯಾಬಿಟಿಸ್‌ಗೆ ಇದೇ ಕಾರಣ: ಈ ರೀತಿ ಆಹಾರ ಪದಾರ್ಥಗಳಿಂದ ದೂರ ಇರಿ ಎಂದ ICMR

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಂಸ್ಕರಿಸಿದ ಮತ್ತು ಎಣ್ಣೆಯಲ್ಲಿ ಕರಿದ ಆಹಾರಗಳಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್-ಪ್ರೊಡಕ್ಟ್‌ಗಳಲ್ಲಿ ಅಧಿಕವಾಗಿರುವ ಕಾರಣ ಮಧುಮೇಹಿಗಳು ಇಂತಹ ಆಹಾರ ಸೇವಿಸಿದರೆ ಸಮಸ್ಯೆ ತೀವ್ರವಾಗುತ್ತದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕ್ಲಿನಿಕಲ್ ಪ್ರಯೋಗವು ತಿಳಿಸಿದೆ.

ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್, ಮಧುಮೇಹದಲ್ಲಿ ಸುಧಾರಿತ ಸಂಶೋಧನೆಗಾಗಿ ICMR ಕೇಂದ್ರದಿಂದ ಈ ಪ್ರಯೋಗ ನಡೆಸಲ್ಪಟ್ಟಿದ್ದು, ಈ ಅಧ್ಯಯನವು ಭಾರತದಲ್ಲಿ ಇದೇ ಮೊದಲನೆಯದಾಗಿದೆ. ಮಧುಮೇಹದ ಅಪಾಯವನ್ನು ತಗ್ಗಿಸಲು ಕಡಿಮೆ ಪ್ರಮಾಣದಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್  ಆಹಾರವನ್ನು ಅಳವಡಿಸಿಕೊಳ್ಳುವುದು ಪರಿಣಾಮಕಾರಿ ತಂತ್ರವಾಗಿದೆ ಎಂದು ಸೂಚಿಸುತ್ತದೆ.

ಕೆಂಪು ಮಾಂಸ, ಫ್ರೆಂಚ್ ಫ್ರೈಗಳು, ಕರಿದ ಪದಾರ್ಥಗಳು, ಬೇಕರಿ ಉತ್ಪನ್ನಗಳು, ಪರೋಟ, ಸಮೋಸಾಗಳು ಮತ್ತು ಸಕ್ಕರೆಯ ಆಹಾರ ಗಳಲ್ಲಿ ಗ್ಲೈಕೇಶನ್ ಎಂಡ್ ಹೆಚ್ಚಿರುತ್ತದೆ.

ಸುಧಾರಿತ ಗ್ಲೈಕೇಶನ್ ಎಂಡ್-ಉತ್ಪನ್ನಗಳು  ಗ್ಲೈಕೇಶನ್ ಮೂಲಕ ರೂಪುಗೊಂಡ ಹಾನಿಕಾರಕ ಸಂಯುಕ್ತಗಳಾಗಿವೆ, ಈ ಪ್ರಕ್ರಿಯೆಯಲ್ಲಿ ಪ್ರೋಟೀನ್‌ಗಳು ಅಥವಾ ಲಿಪಿಡ್‌ಗಳನ್ನು ಆಲ್ಡೋಸ್ ಸಕ್ಕರೆಯನ್ನು, ಒಂದು ರೀತಿಯ ಕಾರ್ಬೋಹೈಡ್ರೇಟ್‌ಗಳಿಂದ ಮಾರ್ಪಡಿಸಲಾಗುತ್ತದೆ. ಗ್ಲೈಕೇಶನ್ ಎಂಡ್ಗಳ ಅಧಿಕ ಸೇವನೆಯಿಂದ ಉರಿಯೂತ, ಆಕ್ಸಿಡೇಟಿವ್ ಒತ್ತಡ, ಇನ್ಸುಲಿನ್ ಉತ್ಪಾದನೆ ಕಡಿಮೆ ಮಾಡುತ್ತದೆ. ಹೀಗಾಗಿ ವಿವಿಧ ಆರೋಗ್ಯ ಸಮಸ್ಯೆಗಳು ಉಟಾಗುತ್ತವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!