ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಚ್ ಕರಾವಳಿ ಮತ್ತು ಪಾಕಿಸ್ತಾನ ಮತ್ತು ಈಶಾನ್ಯ ಅರೇಬಿಯನ್ ಸಮುದ್ರದ ಪ್ರದೇಶಗಳಲ್ಲಿ ಆಳವಾದ ಖಿನ್ನತೆಯು ಪಶ್ಚಿಮಕ್ಕೆ ಚಲಿಸಿದೆ ಮತ್ತು ಚಂಡಮಾರುತ ‘ಅಸ್ನಾ’ (‘ಅಸ್-ನಾ’ ಎಂದು ಉಚ್ಚರಿಸಲಾಗುತ್ತದೆ) ಆಗಿ ತೀವ್ರಗೊಂಡಿದೆ ಮತ್ತು ಶುಕ್ರವಾರ ಬೆಳಿಗ್ಗೆ 11.30 ರ ಸುಮಾರಿಗೆ ಅದೇ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.
ಚಂಡಮಾರುತವು ಪ್ರಸ್ತುತ ಭುಜ್ನ ಪಶ್ಚಿಮ-ವಾಯುವ್ಯಕ್ಕೆ 190 ಕಿಮೀ ಮತ್ತು ಗುಜರಾತ್ನ ನಲಿಯಾದಿಂದ 100 ಕಿಮೀ ಪಶ್ಚಿಮ-ವಾಯುವ್ಯಕ್ಕೆ ಮತ್ತು ಪಾಕಿಸ್ತಾನದ ಕರಾಚಿಯಿಂದ 170 ಕಿಮೀ ಆಗ್ನೇಯದಲ್ಲಿದೆ. ಇದರಿಂದಾಗಿ ಭಾರತದ ಅರಬ್ಬಿ ಸಮುದ್ರ ಭಾಗದ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸೂಚನೆಯೂ ಇದೆ.
ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಗೋವಾ ಹಾಗೂ ಕೇರಳ ರಾಜ್ಯಗಳ ಕರಾವಳಿ ಜಿಲ್ಲೆಗಳಿಗೆ ಮಳೆಯ ಅಬ್ಬರ ಎದುರಾಗಲಿದೆ.
ಬಂಗಾಳಕೊಲ್ಲಿಯಲ್ಲೂ ವಾಯುಭಾರ ಕುಸಿತ
ಉದರ ಜೊತೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಆಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಆಗಸ್ಟ್ 30 ರಿಂದ 31ರವರೆಗೆ, ರಾಯಚೂರು, ಯಾದಗಿರಿಯಲ್ಲಿ ಸೆಪ್ಟೆಂಬರ್ 1 ರಂದು ಆರೆಂಜ್ ಅಲರ್ಟ್ ಇರಲಿದೆ. ಉಡುಪಿಯಲ್ಲಿ ಆಗಸ್ಟ್ 31 ರಂದು ಭಾರಿ ಪ್ರಮಾಣದಲ್ಲಿ ಮಳೆ ಬೀಳುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಮುಂದಿನ ಮೂರೂ ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಹಮಾಮಾನ ಇಲಾಖೆ ಮಾಹಿತಿ ಪ್ರಕಾರ, ಬೆಳಗಾವಿ, ಕೊಡಗು, ಕಲಬುರಗಿಗೆ ಆಗಸ್ಟ್ 31ರಂದು ಯೆಲ್ಲೋ ಅಲರ್ಟ್ ಇರಲಿದ್ದು, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ವಿಜಯನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಮುಂದಿನ 2 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ. ಆಗುಂಬೆ, ದಕ್ಷಿಣ ಕನ್ನಡದ ಮಂಗಳೂರು, ಚಿಕ್ಕಮಗಳೂರಿನ ಮೂಡಿಗೆರೆ, ಕೊಡಗಿನ ಗೋಣಿಕೊಪ್ಪದಲ್ಲಿ ಗುರುವಾರ ಧಾರಾಕಾರವಾಗಿ ಮಳೆಯಾಗಿದೆ.
