ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿಯ ಮಿಮಿಕ್ರಿ ಮಾಡಿದ್ದ ವಿಷಯದ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.
ಕಲ್ಯಾಣ ಬ್ಯಾನರ್ಜಿ ಪರ ಮಮತಾ ಬ್ಯಾಟ್ ಬೀಸಿದ್ದು, ಇಷ್ಟೆಲ್ಲಾ ಅವಾಂತರ ಆಗೋಕೆ ರಾಹುಲ್ ಗಾಂಧಿ ವಿಡಿಯೋ ಮಾಡಿದ್ದೇ ಕಾರಣ, ವಿಡಿಯೋ ಮಾಡದಿದ್ದರೆ ವಿಷಯ ಇಷ್ಟು ದೊಡ್ಡದಾಗುತ್ತಿರಲಿಲ್ಲ ಎಂದು ದೂರಿದ್ದಾರೆ.
ಮಿಮಿಕ್ರಿ ಮಾಡಿದ ವಿಷಯ ಅಲ್ಲಿಗೆ ಅಲ್ಲೇ ಮುಗಿದುಹೋಗುತ್ತಿತ್ತು. ರಾಹುಲ್ ಗಾಂಧಿ ವಿಡಿಯೋ ಮಾಡಬಾರದಿತ್ತು. ಅವರ ವಿಡಿಯೋ ಮಾಡುವ ವಿಷಯ ಯಾರಿಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.