ಸುದೀಪ್ ನ ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ: ರವಿಚಂದ್ರನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ನಿರ್ಮಾಪಕ ಎನ್.ಕುಮಾರ್ (N. Kumar) ಮತ್ತು ಕಿಚ್ಚ ಸುದೀಪ್ (Sudeep) ನಡುವಿನ ಆರೋಪಗಳ ವಿಚಾರಕ್ಕೆ ಇದೀಗ ರವಿಚಂದ್ರನ್ ಎಂಟ್ರಿ ಆಗಿದ್ದಾರೆ.

ಇಂದು ಮಧ್ಯಾಹ್ನ ಕೆಲ ನಿರ್ಮಾಪಕರು ಭೇಟಿ ಮಾಡಿದ ರವಿಚಂದ್ರನ್ , ನಿರ್ಮಾಪಕ ಎನ್.ಕುಮಾರ್ ಹಾಗೂ ಸುದೀಪ್ ನಡುವಿನ ಮನಸ್ತಾಪ ಕುರಿತು ಚರ್ಚಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ‘ಪರಿಸ್ಥಿತಿ ಸರಿಯಿಲ್ಲ ಅಂದ್ರೆ ಮನಸ್ಥಿತಿನೂ ಸರಿ ಇರಲ್ಲ. ನನಗೆ ಏನು ಸ್ಟೋರಿ ಅಂತ ಪೂರ್ತಿಯಾಗಿ ಗೊತ್ತಿಲ್ಲ. ಅವರು ಏನು ಹೇಳಿದ್ರು, ಇವರು ಏನ್ ಹೇಳಿದ್ರು ಕೇಳ್ಕೊಂಡು ತೀರ್ಮಾನ ತೆಗೆದುಕೊಳ್ಳಲ್ಲ ನಾನು. ಸುದೀಪ್ ಗೆ ನೋವಾಗಿರೋದು ನಿಜ. ಕುಮಾರ್ ಅವರು ನನಗೆ ಫೋನ್ ಮಾಡಿದ್ದರು. ಶೂಟಿಂಗ್ ನಲ್ಲಿದ್ದೆ ಹಾಗಾಗಿ ಪಿಕ್ ಮಾಡೋಕೆ ಆಗ್ಲಿಲ್ಲ. ಈ ವಿಷಯದ ಕುರಿತು ನಾನು ಯೋಚನೆ ಮಾಡಬೇಕು. ನಾನು ಕೇವಲ ಮಾತನ್ನು ನಂಬಲ್ಲ, ದಾಖಲೆ ಕೊಡಬೇಕು ಎಂದರು.

ಸುದೀಪ್ ಹತ್ತಿರ ಮಾತಾಡ್ಬೇಕಾ ಅನ್ನುವುದನ್ನು ಯೋಚನೆ ಮಾಡ್ತೀನಿ. ಗಂಡ ಹೆಂಡ್ತಿ ಜಗಳ ಇದ್ದಂಗೆ ಇದು. ಬೀದಿಗೆ ಬಂದಿದೆ ಏನು ಮಾಡೋಕೆ ಆಗಲ್ಲ. ನಾನು ಇಷ್ಟು ದಿನ ತಪ್ಪಿಸಿಕೊಂಡು ಓಡಾಡ್ತಿದ್ದೆ, ಈ ವಿಷಯ ಬಗ್ಗೆ ರಿಯ್ಯಾಕ್ಟ್ ಮಾಡೋದು ಬೇಡ ಅಂತ. ನನ್ನ ಮಗನ ಮೇಲೆ ಆರೋಪ ಬಂದಿದೆ. ಅಷ್ಟು ಸುಲಭವಾಗಿ ಬಿಟ್ಟುಕೊಡಲ್ಲ ನಾನು. ಕುಮಾರ್ ಬರಲಿ. ಕೇಳು ಮಾತುಗಳು ಹರ್ಟ್ ಆಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದಾರೆ. ದಿನ ಬೆಳಗ್ಗೆ ಎದ್ದರೆ ಇದೆ ಶುರುವಾಗಿದೆ ಎಂದು ಬೇಸರ ಪಟ್ಟುಕೊಂಡರು.

ದಾಖಲೆ ಮುಂದಿಟ್ಟು ಮಾತಾಡ್ಬೇಕು. ಮನಸ್ಥಿತಿ, ಪರಿಸ್ಥಿತಿ ಎರಡೂ ಬ್ಯಾಲೆನ್ಸ್ ಮಾಡಬೇಕು. ಫಸ್ಟ್ ಕೂಲ್ ಮಾಡೋಣ. ತೊಂದರೆ ಏನಂತ ಗೊತ್ತಿಲದೇ ಸಪೋರ್ಟ್ ಮಾಡೋಕೆ ಆಗಲ್ಲ. ನಾನು 30 ವರ್ಷಗಳ ಹಿಂದೆ ಒಂದು ಪುಸ್ತಕ ಮಾಡಿಕೊಟ್ಟಿದೆ, ಹೇಗೆ ಅಸೋಸಿಯೇಷನ್ ಮಾಡಬೇಕು ಅಂತ. ಯಾರು ಫಾಲೋ ಮಾಡಿಲ್ಲ ಈಗ ಅನುಭವಿಸುತ್ತಿದ್ದಾರೆ. ಕುಮಾರ್ ಹೇಳ್ತಾರೆ ನಾನು ಆರೋಪ ಮಾಡಿಲ್ಲ ಮನವಿ ಮಾಡ್ದೆ ಅಂತ. ಅದು ಸುದೀಪ್ ಗೆ ಬೇಜಾರ್ ಆಗಿದೆ. ಜೊತೆಗೆ ಕೂತು ಊಟ ಮಾಡಿದವರು ಈಗ ಬೆರಳು ತೋರಿಸಿ ಮಾತಾಡ್ತಿದ್ದಾರೆ ಅಂದರೆ ಹರ್ಟ್ ಆಗಲ್ವ..? ಎರಡು ಕಡೆ ಸಹನೆ ಮೀರಿದೆ. ಪ್ರತಿಭಟನೆ ಮಾಡ್ತಿರೋ ಕುಮಾರ್ ಗೆ ಬಿಡೋಕೆ ಹೇಳಿ. ಸುದೀಪ್ ನ ನಾನು ಕರಿಸೋದಿಲ್ಲ, ನಾನೇ ಹೋಗಿ ಮಾತಾಡ್ತೀನಿ. ಸುದೀಪ್ ಗೆ ಸರಿ ಅನ್ಸಿದ್ರೆ ಮಾತ್ರ ಹೋಗಿ ಮಾತಾಡ್ತೀನಿ. ಕುಮಾರ್ ದು ತಪ್ಪು ಅಂದ್ರೆ ಡೈರೆಕ್ಟ್ ಆಗಿ ಬೈತೀನಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!