ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಕೂಲಂಕುಷವಾಗಿ ಪರಿಶೀಲಿಸುವ ಸರ್ಕಾರದ ಯೋಜನೆಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಸಾವಿರಾರು ಪ್ರತಿಭಟನಾಕಾರರು ಟೆಲ್ ಅವಿವ್ ಮತ್ತು ಇಸ್ರೇಲ್‌ನಾದ್ಯಂತ ನಗರಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾಗಿ ಅಲ್ಲಿನ ಸ್ಥಳೀಯ ಮಾಧ್ಯಮ ಅಲ್ ಜಜೀರಾ ವರದಿ ಮಾಡಿದೆ.
ಪ್ರತಿಭಟನೆಯಲ್ಲಿ ಇಸ್ರೇಲಿ ಪ್ರತಿಭಟನಾಕಾರರು ಟೆಲ್ ಅವಿವ್‌ನಲ್ಲಿ ಸರ್ಕಾರದ ವಿರುದ್ಧ ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸಲು ನೆತನ್ಯಾಹು ಅವರ ಸರ್ಕಾರವು ಮಾಡಿದ ಯೋಜನೆಗಳು ಇಸ್ರೇಲಿಗಳನ್ನು ಕೆರಳಿಸಿದೆ. ತಮ್ಮ ದೇಶದ ಸಮತೋಲನ ವ್ಯವಸ್ಥೆಯ ಮೇಲಿನ ಆಕ್ರಮಣ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡುವ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ತಿಂಗಳು ನಡೆದ ಪ್ರತಿಭಟನೆಗಳಿಗೆ ಮಣಿಸ ನೆತನ್ಯಾಹು ರಾಜಿ ಕಂಡುಕೊಳ್ಳುವ ಭರವಸೆಯಲ್ಲಿ ನ್ಯಾಯಾಂಗ ಸುಧಾರಣಾ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಇದೀಗ ಇಸ್ರೇಲಿಗಳ ಜನಸಂದಣಿ ಬೀದಿಗಿಳಿದು ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಒತ್ತಾಯಿಸಿತು.