ಸಣ್ಣ ಉದ್ದಿಮೆಗಳಿಗೆ ರಿಲೀಫ್‌: ಕೋವಿಡ್‌ ಸಮಯದ ದಂಡ ರಿಫಂಡ್‌ಗೆ ಸಚಿವಾಲಯಗಳಿಗೆ ಸೂಚನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಂದ (MSME Sector) ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ಕೆಲವು ಒಪ್ಪಂದಗಳು, ನಿಯಮಾವಳಿಗಳ ಉಲ್ಲಂಘನೆಗಾಗಿ ಪಡೆದಿದ್ದ ದಂಡಗಳನ್ನು ( Forfeited Amount ) ರಿಫಂಡ್‌ ಮಾಡುವಂತೆ ಹಣಕಾಸು ಸಚಿವಾಲಯ ಸೋಮವಾರ ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಿಗೆ ಸೂಚಿಸಿದೆ.

ಎಂಎಸ್‌ಎಂಇಗಳ ಪರ್ಫಾಮೆನ್ಸ್‌ ಸೆಕ್ಯುರಿಟಿ, ಬಿಡ್‌ ಸೆಕ್ಯುರಿಟಿ, ಲಿಕ್ವಿಡೇಟೆಡ್‌ ಡ್ಯಾಮೇಜ್‌ಗಳಿಗೆ ಸಂಬಂಧಿಸಿ ವಸೂಲು ಮಾಡಲಾಗಿದ್ದ ದಂಡದ ಮೊತ್ತವನ್ನು ರಿಫಂಡ್‌ ಮಾಡಬೇಕು ಎಂದು ಸೂಚಿಸಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ರ ಬಜೆಟ್‌ನಲ್ಲಿ ಘೋಷಿಸಿದ ವಿವಾದ್‌ ಸೇ ವಿಶ್ವಾಸ್‌ 1 ಅಭಿಯಾನದ ಭಾಗವಾಗಿ ಹಣಕಾಸು ಇಲಾಖೆಯು ಎಂಎಸ್‌ಎಂಇಗಳಿಗೆ ಈ ನೆರವನ್ನು ನೀಡಿದೆ. ಎಂಎಸ್‌ಎಂಇಗಳಿಂದ ಪಡೆದಿದ್ದ ಪರ್ಫಾಮೆನ್ಸ್‌ ಸೆಕ್ಯುರಿಟಿಯಲ್ಲಿ 95% ಮೊತ್ತವನ್ನು ರಿಫಂಡ್‌ ಮಾಡಲಾಗುವುದು. 95% ಬಿಡ್‌ ಸೆಕ್ಯುರಿಟಿಯನ್ನು ರಿಫಂಡ್‌ ಮಾಡಲಾಗುವುದು. ಲಿಕ್ವಿಡೇಟೆಡ್‌ ಡ್ಯಾಮೇಜ್‌ (Liquidated damages) ಬಾಬ್ತು ಕಡಿತಗೊಳಿಸಿದ್ದ ಮೊತ್ತದಲ್ಲಿ 95% ಮೊತ್ತವನ್ನು ರಿಫಂಡ್‌ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಒಪ್ಪಂದಗಳನ್ನು ಉಲ್ಲಂಘಿಸಿದ್ದಕ್ಕಾಗಿ ಕಂಪನಿಗಳನ್ನು ನಿಷೇಧಿಸಿದ್ದರೆ, ಅದನ್ನು ರದ್ದುಪಡಿಸಲಾಗುವುದು. ರಿಫಂಡ್‌ ಮೊತ್ತಕ್ಕೆ ಬಡ್ಡಿ ಮಾತ್ರ ಸಿಗುವುದಿಲ್ಲ. ಈ ಸಲದ ಬಜೆಟ್‌ನಲ್ಲಿ ಎಂಎಸ್‌ ಎಂಇಗಳಿಗೆ ರಿಲೀಫ್‌ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!