ಪ್ರಧಾನಿ ಮೋದಿಗೆ ಸಿಕ್ಕಿತು ಲಿಯೋನೆಲ್ ಮೆಸ್ಸಿಯ ಜೆರ್ಸಿ ಗಿಫ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅರ್ಜೆಂಟೀನಾ ಫುಟ್ ಬಾಲ್ ಆಟಗಾರ ಲಿಯೋನೆಲ್​ ಮೆಸ್ಸಿ (Lionel Messi)ಯ​ ಜೆರ್ಸಿ ಉಡುಗೊರೆಯಾಗಿ ಸಿಕ್ಕಿದೆ.

ಅರ್ಜೆಂಟೀನಾದ ಸರಕಾರಿ ಇಂಧನ ಸಂಸ್ಥೆಯ ವೈಪಿಎಫ್​ನ ಮುಖ್ಯಸ್ಥರಾದ ಪ್ಯಾಬ್ಲೊ ಗೊನ್ಜಾಲೆಜ್​ ಅವರು ಪ್ರಧಾನಿ ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ಸ್ಮರಣಿಕೆಯಾಗಿ ಜೆರ್ಸಿಯನ್ನು ನೀಡಿದ್ದಾರೆ.


ಗೊನ್ಜಾಲೆಜ್​ ಭಾರತದಲ್ಲಿ ನಡೆಯುತ್ತಿರುವ ಇಂಧನ ಸಪ್ತಾಹಕ್ಕಾಗಿ ಭಾರತಕ್ಕೆ ಬಂದಿದ್ದಾರೆ.ಈ ವೇಳೆ ಅವರು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿಯಾಗಿ ಜೆರ್ಸಿ ಕೊಟ್ಟಿದ್ದಾರೆ.

ಈ ಹಿಂದೆ ಅರ್ಜೆಂಟೀನಾ ತಂಡ ಫುಟ್ಬಾಲ್​ ವಿಶ್ವ ಕಪ್​ ಗೆದ್ದ ತಕ್ಷಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಶುಭಾಶಯ ಕೋರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!