ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪಲ್ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಹೆಸರು ಎಲ್ಲರಿಗೂ ಚಿರಪರಿಚಿತ. ಫ್ಯಾಶನ್ ವಿಷಯಕ್ಕೆ ಬಂದರೆ, ಸ್ಟೀವ್ ಜಾಬ್ಸ್ ಬ್ಲಾಕ್ ನೆಕ್ ಟಿ-ಶರ್ಟ್, ಜೀನ್ಸ್ ಮತ್ತು ಡ್ಯಾಡ್ ಸ್ನೀಕರ್‌ಗಳ ಸಮವಸ್ತ್ರಕ್ಕೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮೇಲಾಗಿ 1970-1980ರ ನಡುವೆ ಜಾಬ್ಸ್ ಧರಿಸಿದ್ದ ಬಿರ್ಕೆನ್‌ಸ್ಟಾಕ್ ಅರಿಜೋನಾ ಬ್ರೌನ್ ಲೆದರ್ ಸ್ಯಾಂಡಲ್‌ಗಳು ಅವರಿಗೆ ತುಂಬಾ ಇಷ್ಟ. ಸ್ಟೀವ್ ಜಾಬ್ಸ್ ಆಪಲ್‌ನ ಇತಿಹಾಸದ ಕೆಲವು ಪ್ರಮುಖ ಕ್ಷಣಗಳಲ್ಲಿ ಈ ಚಪ್ಪಲಿಯನ್ನು ಧರಿಸಿದ್ದರು.
1976 ರಲ್ಲಿ, ಅವರು ಆಪಲ್ ಸಹ-ಸಂಸ್ಥಾಪಕ ಸ್ಟೀವ್ ವೋಜ್ನಿಯಾಕ್ ಅವರೊಂದಿಗೆ ಲಾಸ್ ಆಲ್ಟೋಸ್ ಗ್ಯಾರೇಜ್‌ನಲ್ಲಿ ಆಪಲ್ ಕಂಪ್ಯೂಟರ್ ಅನ್ನು ಪ್ರಾರಂಭಿಸಿದ ವೇಳೆ ಈ ಚಪ್ಪಲಿ ಧರಿಸಿದ್ದರಂತೆ. ಈ ಪ್ರಸಿದ್ಧ ಚಪ್ಪಲಿಯಯನ್ನು ಇತ್ತೀಚೆಗೆ ಅಮೆರಿಕದ ಜೂಲಿಯನ್ಸ್ ಹರಾಜು ಕಂಪನಿ ಹರಾಜು ಮಾಡಿದೆ. ಈ ಹರಾಜಿನ ಭಾಗವಾಗಿ, ಈ ಹಳೆಯ ಚಪ್ಪಲಿಗಳ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಈ ಚಪ್ಪಲಿಗಳನ್ನು ಪಡೆಯಲು ವ್ಯಕ್ತಿಯೊಬ್ಬರು 2,20,00 ಸಾವಿರ ಡಾಲರ್ (ಸುಮಾರು 1.78 ಕೋಟಿ ರೂ.) ಪಾವತಿಸಿರುವುದು ಗಮನಾರ್ಹ.
ಜೂಲಿಯನ್ ಹರಾಜಿನ ಸದಸ್ಯರು ಇದರ ಬೆಲೆ 6,000 ಡಾಲರ್ ಎಂದು ಅಂದಾಜಿಸಿದ್ದರು. ಆದರೆ, ದಾಖಲೆಯ 2 ಲಕ್ಷ 20 ಸಾವಿರ ಡಾಲರ್ ಸಿಕ್ಕಿದೆ. ದಾಖಲೆ ಬೆಲೆಗೆ ಸ್ಯಾಂಡಲ್ ಖರೀದಿಸಿದವರು ಯಾರು ಎಂದು ಹೇಳಲು ಹರಾಜಿನ ಕಂಪನಿ ನಿರಾಕರಿಸಿವೆ. ಸ್ಟೀವ್ ವೋಜ್ನಿಯಾಕ್ ಜೊತೆಗೆ, ಸ್ಟೀವ್ ಜಾಬ್ಸ್ 1976 ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಕಂಪನಿಯನ್ನು ಪ್ರಾರಂಭಿಸಿದರು. ಸ್ಟೀವ್ ಜಾಬ್ಸ್ 2011 ರಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಅವರ ನೆಚ್ಚಿನ ಚಪ್ಪಲಿಗಳನ್ನು ಸುರಕ್ಷಿತವಾಗಿ ಇರಿಸಿ ಹರಾಜು ಹಾಕಲಾಯಿತು.