ಮಳೆ ಹೆಚ್ಚಾಗಿ ವಾತಾವರಣ ತಣ್ಣಗಾಗಿದೆ. ಈ ವಾತಾವರಣದಲ್ಲಿ ಶೀತ, ಜ್ವರ, ಕೆಮ್ಮು ಹಾಗೂ ಗಂಟಲು ನೋವು ಮಾಮೂಲು. ತಕ್ಷಣದ ನೆಮ್ಮದಿಗೆ ಮನೆಯಲ್ಲಿಯೇ ಕೆಲವು ಮನೆ ಮದ್ದುಗಳನ್ನು ತಯಾರಿಸಬಹುದು, ಆದರೂ ತಗ್ಗದಿದ್ದಲ್ಲಿ ವೈದ್ಯರನ್ನು ಕಾಣಿ..
ಉಪ್ಪು ಹಾಗೂ ಬಿಸಿನೀರಿನಿಂದ ಗಾರ್ಗಲ್ ಮಾಡಿ, ದಿನಕ್ಕೆರಡು ಬಾರಿ ಮಾಡುವುದು ಉತ್ತಮ
ಬಿಸಿನೀರಿನ ಲೋಟಕ್ಕೆ ಎರಡು ಸ್ಪೂನ್ ಜೇನುತುಪ್ಪ ಹಾಕಿ ಕುಡಿಯಿರಿ.
ನೀರಿಗೆ ಉಪ್ಪು ಹಾಗೂ ನಿಂಬೆರಸ ಹಾಕಿ ಕುಡಿಯಿರಿ
ಪುದೀನ ಹಾಗೂ ತುಳಸಿ ರಸಕ್ಕೆ ಜೇನುತುಪ್ಪ ಹಾಕಿ ಸೇವಿಸಿ
ಶುಂಠಿ ಹಾಗೂ ಪುದೀನ ರಸಕ್ಕೆ ಜೇನುತುಪ್ಪ ಹಾಕಿ ನೆಕ್ಕಬಹುದು
