ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎಲೋನ್ ಮಸ್ಕ್ ಹ್ಯೂಮನಾಯ್ಡ್ ರೋಬೋಟ್(Humanoid Robot)ನ ಆವೃತ್ತಿಯನ್ನು ಪರಿಚಯಿಸಿದರು. ಈ ಸಂದರ್ಭ ಎಲಾನ್ ಮಸ್ಕ್, ಇದು ಮುಂದೊಂದು ದಿನ ಬಡತನವನ್ನು ತೊಡೆದು ಹಾಕುತ್ತದೆ ಎಂದು ಹೇಳಿದ್ದಾರೆ.
ವಾರ್ಷಿಕ ಎಐ ದಿನದ ಪ್ರಸ್ತುತಿಯ ಸಮಯದಲ್ಲಿ ಟೆಸ್ಲಾ ಆಪ್ಟಿಮಸ್ ರೋಬೋಟ್’ನ್ನ ವೇದಿಕೆಯ ಮೇಲೆ ಇರಿಸಲಾಯಿತು. ರೋಬೋಟ್ ಅಲ್ಲಿದ್ದವರತ್ತ ಕೈಬೀಸಿ ತನ್ನ ಕೈಗಳನ್ನ ಮೇಲಕ್ಕೆತ್ತಿತು.
ಸಿಲಿಕಾನ್ ವ್ಯಾಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಸ್ಕ್, ‘ಸಾಧ್ಯವಾದಷ್ಟು ಬೇಗ ಉಪಯುಕ್ತ ಹ್ಯೂಮನಾಯ್ಡ್ ರೋಬೋಟ್ ರಚಿಸುವುದು ನಮ್ಮ ಗುರಿಯಾಗಿದೆ. ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ ಎಂದರು.
ನೆಲದ ಮೇಲೆ ಕುಳಿತುಕೊಳ್ಳುವುದರ ಜೊತೆಗೆ, ಇದು ಸಾಮಾನ್ಯ ಜನರಂತೆ ಸಂಗೀತದ ರಾಗಕ್ಕೆ ನೃತ್ಯ ಮಾಡಲು ಸಹ ಸಾಧ್ಯವಾಗುತ್ತದೆ. ರೋಬೋಟ್’ನ ಮತ್ತೊಂದು ಆವೃತ್ತಿ, ಆಪ್ಟಿಮಸ್’ನಂತಹ ಟೆಸ್ಲಾ-ನಿರ್ಮಿತ ಭಾಗಗಳ ಬದಲಿಗೆ ಆಫ್-ದಿ-ಶೆಲ್ಫ್ ಘಟಕಗಳೊಂದಿಗೆ ನಿರ್ಮಿಸಲಾಗಿದೆ. ನಾವು ನಿಮಗೆ ತೋರಿಸಿರುವುದಕ್ಕಿಂತ ಹೆಚ್ಚಿನ ಕಾರ್ಯಗಳನ್ನ ರೋಬೋಟ್ ನಿರ್ವಹಿಸಬಹುದು ಎಂದು ಮಸ್ಕ್ ಹೇಳಿದರು.
ಟೆಸ್ಲಾ ಆಪ್ಟಿಮಸ್ ರೋಬೋಟ್’ನ್ನ ಹೆಚ್ಚಿನ ದರದಲ್ಲಿ ಉತ್ಪಾದಿಸಲು ವಿನ್ಯಾಸಗೊಳಿಸುತ್ತಿದೆ, ಇದು ಬೆಲೆಯನ್ನು $20,000ಕ್ಕಿಂತ ಕಡಿಮೆಗೆ ತರುತ್ತದೆ.
ಇದು ಸಮೃದ್ಧಿಯ ಭವಿಷ್ಯ, ಬಡತನವಿಲ್ಲದ ಭವಿಷ್ಯ, ಉತ್ಪನ್ನಗಳು ಮತ್ತು ಸೇವೆಗಳ ವಿಷಯದಲ್ಲಿ ನೀವು ಬಯಸಿದ್ದನ್ನ ನೀವು ಪಡೆಯಬಹುದಾದ ಭವಿಷ್ಯ ಎಂದು ಮಸ್ಕ್ ಹೇಳಿದರು.
ಇದು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಭದ್ರತೆಯ ದೃಷ್ಟಿಯಿಂದ ಇದು ಉತ್ತಮವಾಗಿರುತ್ತದೆ, ಅದನ್ನು ತಿರುಚಲಾಗುವುದಿಲ್ಲ. ಮೂರರಿಂದ ಐದು ವರ್ಷದೊಳಗಿನ ಸಾಮಾನ್ಯ ಜನರು ಸಹ ರೋಬೋಟ್’ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ ಎಂದರು.
