ಹೊಸದಿಗಂತ ವರದಿ, ಮಡಿಕೇರಿ:
ಸಿಂಗಾಪುರದಲ್ಲಿ ಸೆ.3ರಂದು ನಡೆಯಲಿರುವ ಅಂತರರಾಷ್ಟ್ರೀಯ ಏಷ್ಯನ್ ನೆಟ್ಬಾಲ್ ಕ್ರೀಡಾಕೂಟಕ್ಕೆ ಭಾರತೀಯ ತಂಡದ ಉಪನಾಯಕಿಯಾಗಿ ಬಿ.ಸಿ.ಮೇಘನಾ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪ ನಿವಾಸಿ ಬಿ.ಎ. ಚನ್ನಪ್ಪ ಪೂಜಾರಿ- ಬಿ.ಸಿ.ನಳಿನಾಕ್ಷಿ ದಂಪತಿಯ ಪುತ್ರಿಯಾಗಿರುವ ಮೇಘನಾ ಉಜಿರೆಯ ಎಸ್.ಡಿ.ಎಂ ವಿದ್ಯಾಸಂಸ್ಥೆಯಲ್ಲಿ ಮೊದಲ ವರ್ಷದ ಎಂ.ಕಾಂ ವ್ಯಾಸಂಗ ಮಾಡುತ್ತಿದ್ದಾರೆ.
ಇವರು ಕರ್ನಾಟಕ ತಂಡದಿಂದ ತೆಲಂಗಾಣ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ್, ಚತ್ತಿಸ್ಘಡ್ನಲ್ಲಿ ನಡೆದ ನೆಟ್ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದುಕೊಂಡ ಹೆಗ್ಗಳಿಕೆಗೆ ಪಾತ್ರರಾಗಿದ್ದು, ರಮೇಶ್ ಹೆಚ್, ಸುದೀನ ಪೂಜಾರಿ, ನಿತಿನ್ ಪೂಜಾರಿ, ಶಾರದಾ ಬಾರಕೂರು, ಮೇಘನಾ ಅವರ ತರಬೇತುದಾರರಾಗಿದ್ದಾರೆ.
ಗಿರೀಶ್ ಅವರು ಭಾರತವನ್ನು ಪ್ರತಿನಿಧಿಸುತ್ತಿರುವ ನೆಟ್ಬಾಲ್ ತಂಡದ ತರಬೇತುದಾರರಾಗಿದ್ದು, ಬಿ.ಸಿ. ಮೇಘನಾ ಉಪನಾಯಕಿಯಾಗಿ ತಂಡವನ್ನು ಮುನ್ನೆಡಸಲಿದ್ದಾರೆ.
