ಹೊಸದಿಗಂತ ಡಿಜಿಟಲ್ ಡೆಸ್ಕ್
‘ಉತ್ತರನ್’ ವೆಬ್ ಸೀರೀಸ್ ನಿಂದ ಖ್ಯಾತಿ ಗಳಿಸಿರುವ ನಟಿ ಶ್ರೀಜಿತಾ ಡೆ ತನ್ನ ಜರ್ಮನ್ ಬಾಯ್ ಫ್ರೆಂಡ್ ಮೈಕೆಲ್ ಬ್ಲೋಮ್ ಪಾಪೆಯೊಂದಿಗೆ ಗಣೇಶ ಚರ್ತುರ್ಥಿ ಹಬ್ಬದ ಉತ್ಸಾಹವನ್ನು ಆನಂದಿಸುತ್ತಿದ್ದಾರೆ.
ಇತ್ತೀಚೆಗೆ ಮಾಧ್ಯಮವೊಂದರ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ನಟಿ ಬಾಯ್ ಪ್ರೆಂಡ್ ಮೈಕೆಲ್ ಜೊತೆಗಿನ ಸಂಬಧದ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಈ ವರ್ಷ ಕೋವಿಡ್ ನಿರ್ಭಂಧ ಇಲ್ಲದಿರುವುದರಿಂದ ಗಣೇಶ ಚತುರ್ಥಿಯನ್ನು ಭಾವಿ ಪತಿ ಮೈಕೆಲ್ ಜೊತೆಗೆ ಆಚಲು ವಿಶೇಷವಾಗಿ ಪ್ಲಾನ್ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ಶ್ರೀಜಿತಾ ಮೈಕೆಲ್ ಮೂಲತಃ ವಿದೇಶಿಗನಾದರೂ ಗಣೇಶ ಚತುರ್ಥಿ ಮತ್ತು ಇತರ ಭಾರತೀಯ ಹಬ್ಬಗಳನ್ನು ಆಚರಿಸಲು ಎಷ್ಟು ಉತ್ಸುಕನಾಗಿರುತ್ತಾರೆ ಎಂಬ ಸಂಗತಿಯನ್ನು ಹೇಳಿದ್ದಾಳೆ.
 ʼಮೈಕೆಲ್ ಬೇರೆ ದೇಶ, ವಿಭಿನ್ನ ಜನಾಂಗದಿಂದ ಬಂದವನು. ಅವನಿಗೆ ನನ್ನ ಸಂಸ್ಕೃತಿ ಅರ್ಥವಾಗುವುದಿಲ್ಲ ಎಂದು ನಾನು ಪ್ರಾರಂಭದಲ್ಲಿ ಭಾವಿಸಿದ್ದೆ. ಆದರೆ ನಾನು ತಿಳಿದುಕೊಂಡದ್ದು ತಪ್ಪಾಗಿತ್ತು. ನಾವು ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದು ಹಲವಾರು ಹಬ್ಬಗಳನ್ನು ಒಟ್ಟಿಗೆ ಆಚರಿಸಿದ್ದೇವೆ. ಅವನು ನಮ್ಮ ಸಂಸ್ಕೃತಿಯನ್ನು ತನ್ನದೆಂದು ಸ್ವೀಕರಿಸುವುದನ್ನು ನೋಡಿದರೆ ಸಂತೋಷದಿಂದ ಹೃದಯ ಹಿಗ್ಗುತ್ತದೆ ಎಂದು ಶ್ರೀಜಿತಾ ಬಾಯ್ ಫ್ರೆಂಡ್ ಗುಣಗಾನ ಮಾಡಿದ್ದಾಳೆ.

 ʼಅವನು ಹಬ್ಬದ ಆಚರಣೆಗೆ ಮಾತ್ರ ನನ್ನೊಂದಿಗೆ ಸೇರಿಕೊಳ್ಳುವುದಿಲ್ಲ. ನಮ್ಮ ಪ್ರತಿಯೊಂದು ಸಂಪ್ರದಾಯ/ಆಚರಣೆಯ ಹಿಂದಿನ ಕಥೆ ಅಥವಾ ತರ್ಕವನ್ನು ತಿಳಿದುಕೊಳ್ಳಲು ಬಯಸುತ್ತಾನೆ. ನಮ್ಮ ಸಂಸ್ಕೃತಿಯನ್ನು ಕಂಡು ಅವನು ವಿಸ್ಮಯಗೊಂಡಿದ್ದಾನೆ. ಗಣೇಶನ ಬಗ್ಗೆ ಅಪಾರ ಭಕ್ತಿ ಹೊಂದಿರುವ ಮೈಕೆಲ್ ಚತುರ್ಥಿಯಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ ಎನ್ನುತ್ತಾರೆ ಶ್ರೀಜಿತಾ.

ನಾವು ಪರಸ್ಪರ ಕಲಿಯುವುದು ತುಂಬಾ ಇದೆ. ನಾನೂ ಸಹ ಹಬ್ಬಗಳ ಸಾರವನ್ನು ಕಲಿಯಲು ಮತ್ತು ಅದನ್ನು ನಿಜವಾಗಿ ಆನಂದಿಸಲು ಪ್ರಯತ್ನಿಸುತ್ತೇನೆ. ಅದೇ ರೀತಿಯಾಗಿ ನಾನು ಮೈಕೆಲ್ ಕುಟುಂಬದ ಜೊತೆಗೆ ಕ್ರಿಸ್ಮಸ್ ಮತ್ತು ಈಸ್ಟರ್ ಹಬ್ಬಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೇನೆ ಎಂದು ಶ್ರೀಜಿತಾ ಹೇಳುತ್ತಾರೆ.