ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರದ ಲಾಲ್ ಚೌಕದಲ್ಲಿ ತೀರ ಇತ್ತೀಚಿನ ವರ್ಷಗಳವರೆಗೆ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವಗಳಂದು ಆತಂಕದ ವಾತಾವರಣವಿರುತ್ತಿತ್ತು. ಅಲ್ಲಿನ ರಾಜಕೀಯ ಪರಿಸ್ಥಿತಿ ಹೇಗಿತ್ತೆಂದರೆ, ಭಾರತದ ರಾಷ್ಟ್ರಧ್ವಜ ಹಾರಿಸುವುದಕ್ಕೂ ಪ್ರತ್ಯೇಕತಾವಾದಿಗಳ ತಕರಾರಿತ್ತು. ಈಗ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದಕ್ಕೆ ಇಲ್ಲಿನ ದೃಶ್ಯಗಳೇ ಸಾಕ್ಷಿ.


