ದಿಗಂತ ವರದಿ ಉಡುಪಿ:
ಶ್ರೀ ಕೃಷ್ಣಾಪುರ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯದ ಮೆರವಣಿಗೆಯೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
 ಸಂಪ್ರದಾಯದಂತೆ ಮಂಗಳವಾರ ಮುಂಜಾನೆ 2:15ಕ್ಕೆ ಕಾಪುವಿನ ದಂಡತೀರ್ಥದಲ್ಲಿ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಯತಿವರೇಣ್ಯರು ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ, ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಹಾಗು ಅಷ್ಟ ಮಠಾಧೀಶರು ಮೆರವಣಿಗೆಯಲ್ಲಿ ಕೃಷ್ಣ ಮಠಕ್ಕೆ ಸಾಗಿ ಬಂದರು.

 ಮೆರವಣಿಗೆ ಸಾಗಿ ಬರುವ ಬಿಗ್ ಬಜಾರ್, ಕೋರ್ಟ್ ರೋಡ್, ತೆಂಕುಪೇಟೆಯ ಎರಡು ಬದಿಯಲ್ಲಿ ಸಾವಿರಾರು ಭಕ್ತರು ಸ್ವಾಮೀಜಿಯವರ ಪರ್ಯಾಯ ಮೆರವಣಿಗೆಯನ್ನು ಕಣ್ತುಂಬಿಕೊಂಡರು.

ಮೊದಲಿಗೆ ಉಡುಪಿ ಕೃಷ್ಣನ ಟ್ಯಾಬ್ಲೋ ನಂತರ ಕ್ರಮವಾಗಿ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥರು, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥರು, ಸೋದೆ ಶ್ರೀ ವಿಶ್ವವಲ್ಲಭತೀರ್ಥರು, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥರು ಹಾಗು ಶಿರೂರು ಶ್ರೀ ವೇದವರ್ಧನತೀರ್ಥರು ಮೇಣೆಯನ್ನು ವಾಹನದಲ್ಲಿಟ್ಟು ರಥಬೀದಿಗೆ ಸಾಗಿಬಂದರು.
 ಯತಿಗಳ ವಾಹನ ಹಿಂದೆ ಅಯೋಧ್ಯೆ ರಾಮಮಂದಿರ, ವಸುದೇವ ಕೃಷ್ಣ, ಗೀತೋಪದೇಶ ಕೃಷ್ಣಾರ್ಜುನ, ಜಾಂಬವಂತ ಸೃಷ್ಟಿ, ಗಜಾನನ ಮೋಕ್ಷ, ಶೇಷಶಯನ ಲಕ್ಷ್ಮೀ, ಕಾಳಿಂಗ ಮರ್ದನ ಏಳು ಟ್ಯಾಬ್ಲೋಗಳು ಮೆರವಣಿಗೆಯಲ್ಲಿ ಸಾಗಿಬಂದವು.

 ಪಂಚವಾದ್ಯ, ಚೆಂಡೆ, ಡೋಲು, ಬ್ಯಾಂಡ್ ಸೆಟ್, ಶಂಖ ನಾದ, ಕೊಂಬು, ಸ್ಯಾಕ್ಸೋಫೋನ್, ಮರಕಾಲು, ಬಿರುದಾವಳಿ, ಸೌಟ್ಕ್ಸ್ ಗೈಡ್ಸ್ ತಂಡದ ಪಥಸಂಚಲನ ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು. ಉಡುಪಿ ಜಿಲ್ಲಾ ಹಿಂ.ಜಾ.ವೇ ಕಾರ್ಯಕರ್ತರು ಹಾಗು ಎಬಿವಿಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ವಿಶೇಷ ಸಹಕಾರ ನೀಡಿದರು.