ಒಂದು ಬಾರಿ ವೈವಾಹಿಕ ಜೀವನದಲ್ಲಿ ಎಡವಿ ಪೆಟ್ಟು ತಿಂದವರು, ಮತ್ತೆ ಅದರ ಸಹವಾಸಕ್ಕೆ ಹೋಗೋದಿಲ್ಲ. ಮದುವೆಯೇ ಬೇಡ ಎಂದು ಸುಮ್ಮನಾಗುತ್ತಾರೆ. ಪುರುಷರಲ್ಲಿ ಎರಡನೇ ಮದುವೆ ಸಾಮಾನ್ಯ. ಆದರೆ ಮಹಿಳೆಯರು ಎರಡನೇ ಮದುವೆಯಾದರೆ ಅವರನ್ನು ನೋಡುವ ರೀತಿ ಬದಲಾಗುತ್ತದೆ. ಸಮಾಜದ ನಿಂದನೆಗೆ ಹೆದರಿ ಮದುವೆ ಬೇಡ ಎನ್ನುವ ನಿರ್ಧಾರಕ್ಕೆ ಹೆಣ್ಣು ಬಂದುಬಿಡುತ್ತಾಳೆ. ಆದರೆ ಮರುಮದುವೆ ಯಾಕಾಗಬೇಕು, ಇದರಿಂದ ಏನು ಪ್ರಯೋಜನ? ಇದನ್ನೊಮ್ಮೆ ಓದಿ..
ಜೀವನಕ್ಕೆ ಸಂಗಾತಿ ಬೇಕೇ ಬೇಕು. ಪತಿಯೇ ಆಗಿರಬೇಕು ಎಂದಲ್ಲ, ಆದರೆ ನಿಮ್ಮ ಜೊತೆಯೇ ಇದ್ದು, ನಿಮ್ಮ ಕಷ್ಟಸುಖ ಗಮನಿಸುವವರಿದ್ರೆ ಏನು ನಷ್ಟ?
 ನಿಮ್ಮ ಮಗುವಿಗೂ ತಂದೆ ಬೇಕು, ತಂದೆಯ ಸ್ಥಾನದಲ್ಲಿ ನಿಲ್ಲುವ ಒಬ್ಬ ಗುರು ಬೇಕು, ಅವರು ಬಾಯಿಬಿಟ್ಟು ಹೇಳದಿರಬಹುದು ಆದರೆ ಅಪ್ಪ-ಅಮ್ಮ ಎಲ್ಲರಿಗೂ ಬೇಕು.

ಮತ್ತೆ ಪ್ರೀತಿಯಾಗುತ್ತದೆ. ಜೀವನದಲ್ಲಿ ನೀವೆಷ್ಟೇ ದೊಡ್ಡ ಮೋಸದಿಂದ ಹೊರಬಂದು, ಯಾರನ್ನೂ ನಂಬುವುದಿಲ್ಲ ಎಂದರೂ ನಿಮಗೆ ಇನ್ಯಾರ ಮೇಲಾದರೂ ಪ್ರೀತಿ ಆಗೇ ಆಗುತ್ತದೆ. ಇದನ್ನು ಇಗ್ನೋರ್ ಮಾಡದಿರಿ.
 ಮಾನಸಿಕವಾಗಿ, ಆರ್ಥಿಕವಾಗಿ ಬೆಂಬಲ ಸಿಗಲಿದೆ. ದುಡ್ಡಿಗಾಗಿ ಮದುವೆ ಆಗಿ ಎನ್ನುತ್ತಿರುವುದಲ್ಲ, ಇಬ್ಬರೂ ಪರಸ್ಪರ ಒಬ್ಬರ ಮೇಲೊಬ್ಬರು ನಿರ್ಧರಿತರಾಗಬಹುದು.

 ಎರಡನೇ ಮದುವೆಯಲ್ಲಿ ಮೆಚ್ಯುರಿಟಿ ಇರುತ್ತದೆ. ಇದು ಕೇವಲ ದೈಹಿಕ ಸುಖಕ್ಕಾಗಿ ಮಾಡುವ ಸಂಬಂಧ ಅಲ್ಲ, ನಿಮಗೇನು ಬೇಕು, ನೀವು ಆದ್ಯತೆ ನೀಡಬಹುದು.

 ಎಷ್ಟೇ ಮುಂದುವರಿದಿರಬಹುದು, ಜಗತ್ತಿನಲ್ಲಿ ಈಗಲೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ. ನಿಮ್ಮ ಬೆನ್ನ ಹಿಂದೆ ರಕ್ಷಕನೊಬ್ಬನಿದ್ದರೆ ಏನು ಸಮಸ್ಯೆ?

 ವಯಸ್ಸಾದ ಸಮಯದಲ್ಲಿ ಒಬ್ಬಂಟಿತನ ಕಾಡುತ್ತದೆ. ಮಕ್ಕಳು ಓದಲು ಹೋದರೆ, ಮದುವೆಯಾದರೆ ಒಬ್ಬರೇ ಆಗುತ್ತೀರಿ. ಊಟ ಆಯ್ತಾ ಎಂದು ಕೇಳೋಕಾದರೂ ಮನೆಯಲ್ಲಿ ಒಂದು ಜೀವ ಇರಬೇಕಲ್ಲಾ?

 ನಿಮಗೊಬ್ಬ ಬೆಸ್ಟ್ ಫ್ರೆಂಡ್ ಸಿಗುತ್ತಾನೆ. ನಿಮ್ಮ ತೊಳಲಾಟಗಳನ್ನು ಹೇಳುವಾಗ ಆತ ಕೇಳಿಸಿಕೊಳ್ಳುತ್ತಾನೆ. ಅತ್ತಾಗ ಸಮಾಧಾನಿಸಲು ಕೈಗಳಿರುತ್ತವೆ.