ಹೊಸ ದಿಗಂತ ಡಿಜಿಟಲ್ ಡೆಸ್ಕ್, ಮಂಗಳೂರು:
ನಮಸ್ಕಾರ, ನಾನು ಓಟು ಕೇಳಲು ಬಂದಿಲ್ಲ, ಮತದಾನದಲ್ಲಿ ಎಲ್ಲರೂ ಭಾಗವಹಿಸಬೇಕು. ಈ ಮೂಲಕ ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಬೇಕು… ಹೀಗೆಂದು ಮುದ್ದು ಮುದ್ದಾಗಿ ಪುಟಾಣಿ ಹೇಳುತ್ತಿದ್ದರೆ ಅಲ್ಲಿ ನೆರೆದಿದ್ದವರು ಅಕ್ಷರಶಃ ಸಮ್ಮೋಹನಕ್ಕೆ ಒಳಗಾದರು!
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಮಾಣಿ ಪೆರಾಜೆ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿಯಾಗಿರುವ ಸನ್ನಿಧಿ ಎಂಬ ಈ ಪುಟಾಣಿ ಈಗ ಮತದಾನ ಜಾಗೃತಿಯಲ್ಲಿ ಫುಲ್ ಬಿಝಿ!
ತುಳು, ಕನ್ನಡ, ಇಂಗ್ಲಿಷ್, ಕೊಂಕಣಿ ಜತೆಗೆ ಮಲಯಾಳ ಭಾಷೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಈಕೆ ಈಗ ಕಾಸರಗೋಡಿಗೆ ಭೇಟಿ ನೀಡಿದ್ದು, ಕಾಸರಗೋಡು, ಕಾಞಂಗಾಡಿನ ವಿವಿಧೆಡೆ ತೆರಳಿ ಮಲಯಾಳ ಭಾಷೆಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಳೆ. ಇದರ ಭಅಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಸನ್ನಿಧಿಯನ್ನು ಖುದ್ದು ಜಿಲ್ಲಾಧಿಕಾರಿಗಳೇ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಸದ್ಯ ಸನ್ನಿಧಿ, ಮಂಜೇಶ್ವರ, ಕುಂಬಳೆಯ ವಿವಿಧೆಡೆ ಮನೆ, ಅಂಗಡಿ, ಕಚೇರಿ, ಹೋಟೆಲ್, ಆಟೋ ನಿಲ್ದಾಣ, ಲಾಟರಿ ಸ್ಟಾಲ್ ಸೇರಿದಂತೆ ವಿವಿಧ ಸಮುದಾಯದ ಜನರನ್ನು ಭೇಟಿಮಾಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ತೊದಲು ಮಾತುಗಳ ತನ್ನದೇ ಧಾಟಿಯಲ್ಲಿ ಮನವರಿಜೆ ಮಾಡಿಕೊಡುತ್ತಿದ್ದಾಳೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ
